Posts

Showing posts from July, 2017

History of panja panchalingeshwara temple

Image
ಶ್ರೀ ಪರಿವಾರ ಪಂಚಲಿಂಗೇಶ್ವರ ಸ್ವಾಮಿ ದೇವಸ್ಥಾನ ಪಂಜ ಇದು ಅತೀ ಪುರಾತನ ದೇಗುಲವಾಗಿದ್ದು ತುಳುನಾಡ ಇತಿಹಾಸದಲ್ಲಿ ಅಂತರ್ಗತವಾದ ಬಲ್ಲಾಳ ಅರಸುಗಳ ಕಾಲದಿಂದಲೂ ಸೀಮಾ ವ್ಯಾಪ್ತಿಯ ಧಾಮರ್ಿಕ ಕೇಂದ್ರವಾಗಿ ಆರಾಧಿಸಲ್ಪಡುತ್ತಿದೆ. ದೇಗುಲಗಳ ಅಸ್ತಿತ್ವ, ಆಸ್ತಿಕ ಮಹಾಶಯರ ನಂಬಿಕೆಗಳೊಂದಿಗೆ ಬೆಸೆಯಲ್ಪಟ್ಟಿದ್ದು ಐತಿಹಾಸಿಕ ಸತ್ಯಕ್ಕಿಂತಲೂ ಜನಮಾನಸದಲ್ಲಿ ನೆಲೆ ನಿಂತ ಮೂಲ ನಂಬಿಕೆಗಳಿಂದಲೇ ಕ್ಷೇತ್ರದ ಸಾನಿಧ್ಯ ವೃದ್ಧಿಯಾಗುತ್ತಿದೆ ರೂಢವಾದ ನಂಬಿಕಗಳ ಆಧಾರದಲ್ಲಿ ಈ ಕ್ಷೇತ್ರ ಪುರಾತನ ಋಷಿಗಳ ತಪಃ ಪ್ರಭಾವದಿಂದ ಸ್ಥಾಪಿಸಲ್ಪಟ್ಟಿದೆ. ದೈತ್ಯವನದಲ್ಲಿ ವಾನಪ್ರಸ್ತರಾಗಿದ್ದ ಪಾಂಡವರ ನಂಟು ಈ ದೇಗುಲಕ್ಕಿದೆ. ಭಕ್ತ ಜನ ಮಾನಸದಲ್ಲಿ ಇಂದಿಗೂ ನೆಲೆಯಾಗುಳ್ಳ ಮತ್ತು ಇದಕ್ಕೆ ಸಾಕ್ಷಿ ಭೂತವಾಗಿ ಲಭ್ಯ ಕುರುಹುಗಳ ಹಿನ್ನೆಲೆಯಲ್ಲಿ ಚಿಂತಿಸಿದಾಗ, ಪ್ರಭು ಪಂಚಲಿಂಗೇಶ್ವರನನ್ನು ಈ ಕ್ಷೇತ್ರದಲ್ಲಿ ಪ್ರತಿಷ್ಠಾಪಿಸಲಾಗಿರುತ್ತದೆ. ಈ ಕ್ಷೇತ್ರದಿಂದ ಸಾಧಾರಣ 4 ಕಿ.ಮಿ ದೂರದ ಬಂಟಮಲೆ ಎಂಬಲ್ಲಿ ಸದಾಶಿವ ದೇವರು ಲಿಂಗರೂಪಿಯಾಗಿ ಆರಾಧಿಸಲ್ಪಡುತ್ತಿದ್ದು ಪ್ರಕೃತ ಆ ಸ್ಥಳದಲ್ಲಿ ಕೆರೆಯ ಹಾಗೂ ಗುಡಿಯ ಅವಶೇಶಿಕ ಗುರುತುಗಳು ಲಭ್ಯವಿರುತ್ತದೆ. ಆ ಸ್ಥಳದಿಂದ ಈ ಕ್ಷೇತ್ರದ ಜಾತ್ರ ಸಂದರ್ಭದಲ್ಲಿ ಅಲ್ಲಿರುವ ಕೆರೆಯಿಂದ ನೀರನ್ನು ತಂದು ಪ್ರಭುವಿಗೆ ಅಭಿಷೇಕ ಮಾಡುವ ಸಂಪ್ರದಾಯ ನಡೆಯುತ್ತಿದೆ. ಗತಕಾಲದಲ್ಲಿ ಅರ್ಚಕರು ಬಂಟಮಲೆಯ ಮೂಲ ಸ್ಥಳದಲ್ಲಿ ಅರ್ಚನೆಗಾಗಿ ಕಠಿಣವಾದ ಬೆಟ್ಟದ...